Saturday, 29 November 2014

ಓ ಗೆಳತಿ




ಓ ಗೆಳತಿ
ನೀ...ನಿಲ್ಲದ ಮಳೆಯ ಹನಿಯ೦ತೆ ನೀನು 
ನಿನ್ನ ಮಳೆಯ ಹನಿಯಲಿ ನೆನೆಯುತ ನಾನು.

ಚಳಿಯಲಿ ನಡುಗಿಸಿತ್ತಿರುವೆ ನೀನು 

ನಿನ್ನ ಬಿಸಿಲ ಕಿರಣವ ಸೋಕದೆ ನಾನು
ಒದ್ದೆಯಾಗಿದೆ ನನ್ನ ಮೈ,ಮನ
ಒಮ್ಮೆ ಸೋಕಿಸು ಬಾರೆ 
ನಿನ್ನ ಪ್ರೀತಿಯ ಬಿಸಿ ಶಾಖವ ನನಗಾಗಿ ನೀನು.




ನೀವು ಗೆಲ್ಲಬಲ್ಲಿರಿ........

     ಜಯಶಾಲಿಗಳು ವಿಭಿನ್ನ ಕೆಲಸಗಳನ್ನೇನು ಮಾಡುವುದಿಲ್ಲ:              
                    ಅವರು ಮಾಡುವ ರೀತಿ ಭಿನ್ನವಾಗಿರುತ್ತದಷ್ಟೆ.                                                      
                                                ಶಿವ್ ಖೇರಾ


ಮಳೆ



ಮಳೆ ಬರುತಿದೆ, ಮಳೆ ಬರುತಿದೆ
ದರೆ ತಣಿತಿದೆ ನೋಡು
ಖುಷಿ ಹೆಚ್ಛಿದೆ,ಖುಷಿ ಹೆಚ್ಛಿದೆ,
ರೈತನ ಮೊಗದಲಿ ನೋಡು

ಕಪ್ಪೆಗಳು ಒಟಗುಟ್ಟುತ್ತಿವೆ,ಆನ೦ದದಿ
ನಲಿಯುತ ಕುಣಿದಿವೆ ನೋಡು,
ತಣ್ಣನೆಯ,ಚುಮು,ಚುಮು,ಚಳಿಯಿದೆ,

ಪ್ರಿಯೆ ನನಗೊ೦ದು,ಸಿಹಿ ಮುತ್ತೊ೦ದ ನೀಡು
ಮಳೆ ಬರುತಿದೆ, ಮಳೆ ಬರುತಿದೆ
ದರೆ ತಣಿತಿದೆ ನೋಡು.

ಪ್ರೇಮದ ಓಲೆ


ನಲ್ಲೆಗೊ೦ದು ಬರೆದೆ,ನಾನೊ೦ದು ಪ್ರೇಮದ ಓಲೆ

ಅದಕ್ಕೆ ಕಳುಹಿಸಿದಳು,ಮರು ಉತ್ತರ ಮರುದಿನದಲೆ

ಪತ್ರದಲ್ಲಿ ಬರೆದಿದ್ದಳು,ಅವಳ ಸಮ್ಮತಿಯ

ನಸು ನಗುವಿನಲೆ,ನನ್ನ ನೆನೆಯುತಲೆ

ಅವಳ ಮುಗುಳ್ನಗೆಗೆ ಸೋತೆ, ನಾ ಮೌನದಲೆ

ನಲ್ಲೆಯ ಬರುವಿಕೆಗಾಗಿ ಕಾಯುತ ಕುಳಿತಿರುವೆನಲ್ಲೆಯು ಬಹ ದಾರಿಯಲ್ಲಿ.

''ವಿಶ್ವಕರ್ಮ''