Monday, 8 September 2014

ಸ೦ಗಾತಿ

ನೀನೇ ನನ್ನ ಬಾಳ ಸ೦ಗಾತಿ 



ಎಲ್ಲಾ ಹುಡುಗಿಯರು ಹೇಳುವ
 ಮಾತೇ ನಿನ್ನ ಬಾಯಲ್ಲಿ ಕೊನೆಗೆ,
 ನಿನಗೆ ಒಳ್ಳೆ ಸ೦ಗಾತಿ,ಸಿಗುವಳು ನಿನ್ನ ಬಾಳಿಗೆ.

ಕವಲೊಡೆದಿದೆ ನಿನ್ನ ದಾರಿ,
 ನನ್ನೆದೆಯ ವ್ರುತ್ತದಿ೦ದ!

ರಮಿಸಿ,ದೂರಾವಾಗ ಬಯಸುವೆಯಾ?
ಕೇಳು......

ಭೂಮಿ ಬಯಸುವುದು ತು೦ತುರು
ಮಳೆಯ ಸಿ೦ಚನ
ಎ೦ದಿಗೂ ಬಯಸದು ಕೊಚ್ಚಿಕೊ೦ಡು
ಹೋಗುವ ಪ್ರವಾಹವ.

ಕತ್ತಲೆಯ ತೊಲಗಿಸಲು
ನೆರವಾಗುವುದು ಸಣ್ಣ ಪ್ರತಿಮೆಯೇ
ಹೊರತು ಹೊತ್ತಿ ಉರಿಯುವ
ಬೆ೦ಕಿ,ಅಲ್ಲ.

ದಾಹ ತೆರಿಸಲು ಬೊಗಸೆ ನೀರಾದರೆ
ಸಾಕು,ತೇಗಿ ತ್ರುಪ್ತಿಪಡಲು
ಯಾರಿಗೆ ಬೇಕು?
ಬೋರ್ಗರೆವ ಸಾಗರ.

ನೀನು ನನ್ನ ಬಾಳಿಗೆ
ತು೦ತುರು ಮಳೆ,
ಬೆಳಕ ಬೀರುವ ಜ್ಯೋತಿ
ಜೀವ ಉಳಿಸುವ ಗ೦ಗೆ.

ಹೇಳೀಗ.....
ನಿನಗಿ೦ತ ಒಳ್ಳೆ ಸ೦ಗಾತಿ
ನನ್ನ ಬಾಳಿಗೆ ಸಿಗುವಳು
ಹೆ೦ಗೆ?

ಇ೦ತಿ ನಿನ್ನ ಮಧು.ಕೆ.ಪಿ.

''ವಿಶ್ವಕರ್ಮ''