ನನ್ನ ಊರಿಗೆ ಇಟ್ಟಿದ್ದಾರೆ ಕಗ್ಗೆರೆ ಎಂಬ ಹೆಸರು,
ಅಲ್ಲೇ ಶುರುವಾಯಿತು ನನ್ನ ಮೊದಲ ಉಸಿರು,
ನಾ ಕುಣಿದು ,ನಲಿದು ಬೆಳೆದ ನನ್ನ ಊರು,
ತೊದಲು ಮಾತು ಕಲಿತ ಊರು,
ಅಪ್ಪ ಅಮ್ಮ ಅಜ್ಜ ಅಜ್ಜಿ ಬಾಳು ಬೆಳಗಿಸಿದ ನನ್ನ ಊರು,
ನನ್ನ ಮೆಚ್ಚಿನ ಊರು ಅದುವೇ ನನ್ನ ಊರು
ಅದುವೇ ನನ್ನ ಉಸಿರು,ಅದುವೇ ತಂದು ಕೊಡಲಿ ನನಗೊಂದು ಒಳ್ಳೆಯ ಹೆಸರು