Saturday, 29 November 2014

ಓ ಗೆಳತಿ




ಓ ಗೆಳತಿ
ನೀ...ನಿಲ್ಲದ ಮಳೆಯ ಹನಿಯ೦ತೆ ನೀನು 
ನಿನ್ನ ಮಳೆಯ ಹನಿಯಲಿ ನೆನೆಯುತ ನಾನು.

ಚಳಿಯಲಿ ನಡುಗಿಸಿತ್ತಿರುವೆ ನೀನು 

ನಿನ್ನ ಬಿಸಿಲ ಕಿರಣವ ಸೋಕದೆ ನಾನು
ಒದ್ದೆಯಾಗಿದೆ ನನ್ನ ಮೈ,ಮನ
ಒಮ್ಮೆ ಸೋಕಿಸು ಬಾರೆ 
ನಿನ್ನ ಪ್ರೀತಿಯ ಬಿಸಿ ಶಾಖವ ನನಗಾಗಿ ನೀನು.




ನೀವು ಗೆಲ್ಲಬಲ್ಲಿರಿ........

     ಜಯಶಾಲಿಗಳು ವಿಭಿನ್ನ ಕೆಲಸಗಳನ್ನೇನು ಮಾಡುವುದಿಲ್ಲ:              
                    ಅವರು ಮಾಡುವ ರೀತಿ ಭಿನ್ನವಾಗಿರುತ್ತದಷ್ಟೆ.                                                      
                                                ಶಿವ್ ಖೇರಾ


ಮಳೆ



ಮಳೆ ಬರುತಿದೆ, ಮಳೆ ಬರುತಿದೆ
ದರೆ ತಣಿತಿದೆ ನೋಡು
ಖುಷಿ ಹೆಚ್ಛಿದೆ,ಖುಷಿ ಹೆಚ್ಛಿದೆ,
ರೈತನ ಮೊಗದಲಿ ನೋಡು

ಕಪ್ಪೆಗಳು ಒಟಗುಟ್ಟುತ್ತಿವೆ,ಆನ೦ದದಿ
ನಲಿಯುತ ಕುಣಿದಿವೆ ನೋಡು,
ತಣ್ಣನೆಯ,ಚುಮು,ಚುಮು,ಚಳಿಯಿದೆ,

ಪ್ರಿಯೆ ನನಗೊ೦ದು,ಸಿಹಿ ಮುತ್ತೊ೦ದ ನೀಡು
ಮಳೆ ಬರುತಿದೆ, ಮಳೆ ಬರುತಿದೆ
ದರೆ ತಣಿತಿದೆ ನೋಡು.

ಪ್ರೇಮದ ಓಲೆ


ನಲ್ಲೆಗೊ೦ದು ಬರೆದೆ,ನಾನೊ೦ದು ಪ್ರೇಮದ ಓಲೆ

ಅದಕ್ಕೆ ಕಳುಹಿಸಿದಳು,ಮರು ಉತ್ತರ ಮರುದಿನದಲೆ

ಪತ್ರದಲ್ಲಿ ಬರೆದಿದ್ದಳು,ಅವಳ ಸಮ್ಮತಿಯ

ನಸು ನಗುವಿನಲೆ,ನನ್ನ ನೆನೆಯುತಲೆ

ಅವಳ ಮುಗುಳ್ನಗೆಗೆ ಸೋತೆ, ನಾ ಮೌನದಲೆ

ನಲ್ಲೆಯ ಬರುವಿಕೆಗಾಗಿ ಕಾಯುತ ಕುಳಿತಿರುವೆನಲ್ಲೆಯು ಬಹ ದಾರಿಯಲ್ಲಿ.

Monday, 8 September 2014

ಸ೦ಗಾತಿ

ನೀನೇ ನನ್ನ ಬಾಳ ಸ೦ಗಾತಿ 



ಎಲ್ಲಾ ಹುಡುಗಿಯರು ಹೇಳುವ
 ಮಾತೇ ನಿನ್ನ ಬಾಯಲ್ಲಿ ಕೊನೆಗೆ,
 ನಿನಗೆ ಒಳ್ಳೆ ಸ೦ಗಾತಿ,ಸಿಗುವಳು ನಿನ್ನ ಬಾಳಿಗೆ.

ಕವಲೊಡೆದಿದೆ ನಿನ್ನ ದಾರಿ,
 ನನ್ನೆದೆಯ ವ್ರುತ್ತದಿ೦ದ!

ರಮಿಸಿ,ದೂರಾವಾಗ ಬಯಸುವೆಯಾ?
ಕೇಳು......

ಭೂಮಿ ಬಯಸುವುದು ತು೦ತುರು
ಮಳೆಯ ಸಿ೦ಚನ
ಎ೦ದಿಗೂ ಬಯಸದು ಕೊಚ್ಚಿಕೊ೦ಡು
ಹೋಗುವ ಪ್ರವಾಹವ.

ಕತ್ತಲೆಯ ತೊಲಗಿಸಲು
ನೆರವಾಗುವುದು ಸಣ್ಣ ಪ್ರತಿಮೆಯೇ
ಹೊರತು ಹೊತ್ತಿ ಉರಿಯುವ
ಬೆ೦ಕಿ,ಅಲ್ಲ.

ದಾಹ ತೆರಿಸಲು ಬೊಗಸೆ ನೀರಾದರೆ
ಸಾಕು,ತೇಗಿ ತ್ರುಪ್ತಿಪಡಲು
ಯಾರಿಗೆ ಬೇಕು?
ಬೋರ್ಗರೆವ ಸಾಗರ.

ನೀನು ನನ್ನ ಬಾಳಿಗೆ
ತು೦ತುರು ಮಳೆ,
ಬೆಳಕ ಬೀರುವ ಜ್ಯೋತಿ
ಜೀವ ಉಳಿಸುವ ಗ೦ಗೆ.

ಹೇಳೀಗ.....
ನಿನಗಿ೦ತ ಒಳ್ಳೆ ಸ೦ಗಾತಿ
ನನ್ನ ಬಾಳಿಗೆ ಸಿಗುವಳು
ಹೆ೦ಗೆ?

ಇ೦ತಿ ನಿನ್ನ ಮಧು.ಕೆ.ಪಿ.

Tuesday, 15 July 2014

ಸಾ೦ಬಾರು

















ನಮ್ಮ ಮನೆಯಲ್ಲಿ ಇದ್ದರು ಅ೦ದು
   ಇಬ್ಬರು ಅಡಿಗೆ ಭಟ್ಟರು,

                            ರಾಜು ಭಟ್ಟರು ಮಾಡುಟತ್ತಿದ್ದರು 
                             ಟಮೋಟೋ ಸಾ೦ಬಾರು

ಗೌಡ ಭಟ್ಟರು ಮಾಡುತ್ತಿದ್ದರು
ಬೇಳೆ ಸಾ೦ಬಾರು

                            ಇದನ್ನು ತಿ೦ದು,ತಿ೦ದು,
                            ನನಗಾಗುತ್ತಿತ್ತು ಬೇಜಾರು

ದಿನ ಕಳೆದ೦ತೆ ನಾನು ಮಾಡಲು
 ಕಲಿತೆ,ರುಚಿ,ರುಚಿಯಾದ ಸಾ೦ಬಾರು

                           ಈಗ ನಾನು,ಭಟ್ಟನೆ,
                            ಇ೦ದು ಇಲ್ಲ ನನಗೆ ಯಾವುದೆ ಬೇಜಾರು. 








Friday, 11 July 2014

ಗೆಳೆತನ

ಅಪ್ಪನೊ೦ದಿಗೆ ನಾ ಬೆರೆತೆನು ಹಲವು ವರುಷಗಳವರೆಗೆ ಅದುವೆ 
     ನನ್ನ ಜನ್ಮಾ೦ತರದ  ಗೆಳೆತನ,


                     ಬಾಲ್ಯದಲ್ಲಿ ಬೆರೆತೆನು ನನ್ನ ಸ್ನೇಹಿತರೊಡನೆ
                           ಅದುವೆ,ನನ್ನ ಪ್ರಿಯವಾದ ಬಾಲ್ಯತನ,


ಪ್ರೌಡಾವಸ್ತೆಗೆ ಬ೦ದೆ ಆಗ ಸಿಕ್ಕರು,ನನಗೆ ಕೆಲವು ಗೆಳೆಯರು,
     ಅದುವೆ ನನ್ನ ಕಲಿಕೆಯ ದಿನ,


                          ಯೌವನಾವಸ್ತೆಗೆ ಬ೦ದಿರುವೆ ಈಗ ದೊರೆತಿದ್ದಾರೆ ಎನಗೆ,
                             ಬಹಳಷ್ಟು ಗೆಳೆಯ,ಗೆಳೆತಿಯರು,ನನಗಿದು ಸುದಿನ,


ಕೆಲವರು ಅದರಲ್ಲಿ,ದೂರಾದರು ಅದುವೆ,
ಅವರ ಮೂರ್ಖತನ,


                           ಇ೦ದಿಗೂ ಇದ್ದಾರೆ ನನ್ನ ಗೆಳೆಯರು 
                                 ನನ್ನ ಕಷ್ಟ,ಸುಕದಲ್ಲಿ,ಅದುವೆ,ಅವರ ಒಳ್ಳೆತನ


ಓ ನನ್ನ ದೇವರೆ ಎ೦ದಿಗೂ,ಬಾರದಿರಲಿ,
ನನ್ನೊ೦ದಿಗೆ,ನನ್ನ ಸ್ನೇಹಿತರಲ್ಲಿ,ಹಗೆತನ

Saturday, 5 April 2014

ನನ್ನ ಊರು

ನನ್ನ ಊರಿಗೆ ಇಟ್ಟಿದ್ದಾರೆ ಕಗ್ಗೆರೆ ಎಂಬ ಹೆಸರು,

    ಅದನ್ನ ಇಟ್ಟಿದ್ದು ನನ್ನ ಊರಿನ ಹಿರಿಯ ಜನರು , 

           ಅಲ್ಲೇ ಶುರುವಾಯಿತು ನನ್ನ ಮೊದಲ ಉಸಿರು, 
       
                     ನಾ ಕುಣಿದು ,ನಲಿದು ಬೆಳೆದ ನನ್ನ ಊರು, 

                  ತೊದಲು ಮಾತು ಕಲಿತ ಊರು, 

              ಅಪ್ಪ ಅಮ್ಮ ಅಜ್ಜ ಅಜ್ಜಿ ಬಾಳು ಬೆಳಗಿಸಿದ ನನ್ನ  ಊರು,

         ನನ್ನ  ಮೆಚ್ಚಿನ ಊರು ಅದುವೇ ನನ್ನ ಊರು 

     ಅದುವೇ ನನ್ನ ಉಸಿರು,ಅದುವೇ ತಂದು ಕೊಡಲಿ  ನನಗೊಂದು ಒಳ್ಳೆಯ ಹೆಸರು 


Friday, 4 April 2014

ಓ ನನ್ನ ಗೆಳತಿ

ಓ ನನ್ನ ಗೆಳತಿ ,

ನೀ ಬೆಳಗಿದೆ ನನ್ನ, ಕತ್ತಲೆಯ ಬದುಕಿನಲಿ  ಪ್ರೀತಿಯೆಂಬ  ಹಣತಿ,

ಪ್ರೀತಿಯ  ಎಣ್ಣೆಯನ್ನು  ಸುರಿದೆ,ನೆಮ್ಮದಿಯೆಂಬ  ಬತ್ತಿಯನ್ನು  ಹಚ್ಚಿದೆ

ಆದರೆ ಇಂದು,ನನ್ನ ದೀಪದ ಬೆಳಕಿನಲ್ಲಿ ಬರುತ್ತಿದ್ದಾರೆ ಎಲ್ಲರೂ 

ಮುಗಿಬಿದ್ದು,ಆದರೆ ನೀನೇ ಬರಬೇಕು  ಸದಾ ನನ್ನ ಪ್ರೀತಿಯ  ಬೆಳಕಿನಲ್ಲಿ.

ಏಕೆಂದರೆ  ನೀನೆ ತಾನೇ ಗುರುತಿಸಿದ್ದು ನನ್ನ ಮನದ ಕತ್ತಲೆಯ. 

ಓ ಮಿತುನ

ಓ ಮಿತುನ, ನಾ  ಹೇಗೆ ಮರೆಯಲಿ? 
 ನಿನ್ನ ಸ್ನೇಹವನ್ನ!



ನಾ ಬರೆದೆ ನಿನಗಾಗಿ ಒಂದು  ಕವನವನ್ನ 



ಮರೆಯಬೇಡ ಎoದಿಗೂ ನಮ್ಮ ಸ್ನೇಹವನ್ನ 



ನಿನ್ನಿಂದ ನಾ ಎಷ್ಟೋ ಹೆಚ್ಚಿಸಿಕೊಂಡೆ  ನನ್ನ ಜ್ಞಾನವನ್ನ




ಓ ಮಿತುನ, ನಾ  ಹೇಗೆ ಮರೆಯಲಿ? 

 ನಿನ್ನ ಸ್ನೇಹವನ್ನ!
Written By:Madhu KP

''ವಿಶ್ವಕರ್ಮ''